ಬೆಳಾಲು : ಫೆ.10 ರಿಂದ 14 ರವರೆಗೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯ ವಾರ್ಷಿಕ ಉತ್ಸವ ಫೆ.14 ರಂದು ದೈವಗಳ ನೇಮೋತ್ಸವ
ಬೆಳಾಲು : ಫೆ.10 ರಿಂದ 14 ರವರೆಗೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯ ವಾರ್ಷಿಕ ಉತ್ಸವ
ಫೆ.14 ರಂದು ದೈವಗಳ ನೇಮೋತ್ಸವ

ಬೆಳ್ತಂಗಡಿ ತಾಲೂಕಿನ ಬೆಳಾಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಇಲ್ಲಿ ಫೆ.10 ರಿಂದ 14 ರವರೆಗೆ ವಾರ್ಷಿಕ ಉತ್ಸವ ನಡೆಯಲಿದ್ದು, ಫೆ.10 ಸೋಮವಾರದಂದು ಬೆಳಿಗ್ಗೆ 8:00 ಗಂಟೆಗೆ ವೇದಮೂರ್ತಿ ಶ್ರೀ ಶ್ರೀನಿವಾಸ ಹೊಳ್ಳ ಮತ್ತು ಬಳಗದ ಪೌರೋಹಿತ್ಯದಲ್ಲಿ ಪುಣ್ಯಾಹ ಶುದ್ಧಿ, ದೇವತಾ ಪ್ರಾರ್ಥನೆ, ಗಣಹೋಮ, ಮೃತ್ಯುಂಜಯ ಹೋಮ, ನವಗ್ರಹ ಶಾಂತಿ ಹೋಮ, ಕಲಶಪೂಜೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಾಯಂಕಾಲ 4:00 ಗಂಟೆಗೆ ಸುದರ್ಶನ ಹೋಮ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ, ಮಹಾಪೂಜೆ ನಡೆಯಲಿದೆ. ಸಂಜೆ 6:00 ಗಂಟೆಯಿಂದ ಶ್ರೀ ದೇವಿಕಿರಣ್ ಕಲಾನಿಕೇತನ ಇದರ ನೃತ್ಯ ಶಿಕ್ಷಕಿಯರಾದ ವಿಧುಷಿ ಶ್ರೀಮತಿ ಸ್ವಾತಿ ಜಯರಾಮ್ ಹಾಗೂ ವಿಧುಷಿ ಶ್ರೀಮತಿ ಪೃಥ್ವಿ ಸತೀಶ್ ಇವರ ಶಿಷ್ಯವೃಂದದಿಂದ “ನೃತ್ಯಾರ್ಪಣಂ” ಹಾಗೂ ಸಂಜೆ 7:00 ಗಂಟೆಯಿಂದ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನಗಂಧರ್ವ ಪುತ್ತೂರು ಜಗದೀಶ್ ಆಚಾರ್ಯ ಹಾಗೂ ಬಳಗದವರಿಂದ “ಸಂಗೀತ ಗಾನ ಸಂಭ್ರಮ” ನಡೆಯಲಿದ್ದು, “ಕುಣಿತ ಭಜನಾ ಕಮ್ಮಟೋತ್ಸವ” ನಡೆಯಲಿದೆ.
ಫೆ.11 ಮಂಗಳವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಶ್ರೀ ನಾಗದೇವರಿಗೆ ನಾಗತಂಬಿಲ, ಶ್ರೀ ಚಾಮುಂಡೇಶ್ವರಿ ದೇವಿಗೆ ಮಹಾಚಂಡಿಕಾ ಯಾಗ, ಲಲಿತ ಸಹಸ್ರನಾಮ ಕದಳಿಯಾಗ, ಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ ಮತ್ತು ಅನ್ನಸಂತರ್ಪಣೆ ನೆರವೇರಲಿದ್ದು, ಸಂಜೆ 4:00 ಗಂಟೆಯಿಂದ ಆಶ್ಲೇಷ ಬಲಿ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾಪೂಜೆ, ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ರಂಗಪೂಜೆ ನಡೆಯಲಿದೆ. ಸಂಜೆ 5:00 ಗಂಟೆಯಿಂದ “ಯಕ್ಷ ತೆಲಿಕೆ” ಯಕ್ಷ ಹಾಸ್ಯ ವೈಭವ, ರಾತ್ರಿ 8:00 ಗಂಟೆಯಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 9:00 ಗಂಟೆಯಿಂದ “ಮಾಯೊದ ತುಡರ್” ತುಳು ಭಕ್ತಿ ಪ್ರಧಾನ ಹಾಸ್ಯಮಯ ನಾಟಕ ನಡೆಯಲಿದೆ.
ಫೆ.12 ಬುಧವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಶ್ರೀ ನಾಗದೇವರಿಗೆ ನಾಗತಂಬಿಲ, ಶ್ರೀ ಚಾಮುಂಡೇಶ್ವರಿ ದೇವಿಗೆ ಕಲಶಪೂಜೆ, ಕಲಶ ಪ್ರಧಾನ ಹೋಮ, ಪರಿವಾರ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8:00 ಗಂಟೆಯಿಂದ ಆರಿಕೋಡಿ ಚಾಮುಂಡೇಶ್ವರಿ ದೇವಿಯ “ವಾರ್ಷಿಕ ಉತ್ಸವ” ನೆರವೇರಲಿದ್ದು, ಫೆ.13 ಗುರುವಾರದಂದು ಬೆಳಿಗ್ಗೆ 11:30 ರಿಂದ ಶ್ರೀ ಚಾಮುಂಡೇಶ್ವರಿ ದೇವಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು, ಸಾಯಂಕಾಲ ಸಂಜೆ 6:00 ಗಂಟೆಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ವಜ ಕ್ಷೇತ್ರ ಪಾವಂಜೆ ಇವರಿಂದ “ಶ್ರೀ ದೇವಿ ಮಹಾತ್ಮೆ” ಎಂಬ ಪುಣ್ಯಕಥಾ ಭಾಗದ ಯಕ್ಷಗಾನ ಪ್ರಸಂಗ ನಡೆಯಲಿದೆ.
ಫೆ.14 ಶುಕ್ರವಾರದಂದು ರಾತ್ರಿ 8:00 ಗಂಟೆಯಿಂದ ಕ್ಷೇತ್ರದ ಪರಿವಾರ ದೈವಗಳಾದ ಕಲ್ಲುರ್ಟಿ, ಮಂತ್ರದೇವತೆ, ಸನ್ಯಾಸಿ ಗುಳಿಗ, ಶಕ್ತಿ ಗುಳಿಗ ಹಾಗೂ ಇತರ ದೈವಗಳಿಗೆ “ನೇಮೋತ್ಸವ” ನಡೆಯುವುದರೊಂದಿಗೆ ವಾರ್ಷಿಕ ಉತ್ಸವವು ಸಂಪನ್ನಗೊಳ್ಳಲಿದೆ.
Comments