ಸುಳ್ಯ ಜಾತ್ರೆ
ಸುಳ್ಯ ಜಾತ್ರೆ
ಸುಳ್ಯ ಜಾತ್ರೆ ಎಂದಾಕ್ಷಣ ನೆನಪಾಗುವುದು ಜನಜಂಗುಳಿ, ಮೋಜು ಮಸ್ತಿ,ಸಂತೆ,ರಥವೇರಿ ಭಕ್ತರ ಹರಸುವ ಶಂಕ ಚಕ್ರ ಗದಾಪದ್ಮ ಧಾರಿ ಶ್ರೀ ಚೆನ್ನಕೇಶವ ಸ್ವಾಮಿ ಇತ್ಯಾದಿ ಉತ್ಸವದ ಕ್ಷಣ.
ಜಾತ್ರೆ ಪ್ರಾರಂಭದ ದಿನ ಅಂದರೆ ಧನುರ್ಮಾಸ 18 ( ಜನವರಿ 2 )ರಂದು ಬೂಡು ಬಲ್ಲಾಳ ಚಾವಡಿ ಇಂದ ಬಲ್ಲಾಳರ ಪಯೋಳಿ ಬರವುದು, ಚೆನ್ನಕೇಶವನ ಭೇಟಿಯಾಗುವ ಸಂತೋಷದಿಂದ ಕುಕ್ಕನೂರು ದೈವವು ಓಡೋಡಿ ಬರುವ ಆ ಕ್ಷಣ ನೋಡಲು ಸಾಲದು ಎರಡು ಕಣ್ಣು.
ಕುಕ್ಕನೂರು ದೈವವು ಚೆನ್ನಕೇಶನ ಭೇಟಿಯಾಗಿ ಆಯಾ ಗುತ್ತು ಬರ್ಕೆ ಮನೆತನ ದವರನ್ನು ಕರೆದು ನುಡಿ ಕೊಡುವ ನುಡಿ ಕೇಳಲು 7ಜನುಮದ ಪುಣ್ಯ ಮಾಡಿರಬೇಕು.
ಗರುಡ ಗಜಗಂಬವೇರುವ ಕ್ಷಣದಿಂದ ವೈಭವದ ವಾತಾವರಣ ಸುಳ್ಯದಲ್ಲಿ ಮನೆ ಮಾಡುತದೆ ದರುಶನ ಬಲಿಯದಿನ ನಲಿದು ನಲಿದು ಭಕ್ತರಿಗೆ ದರುಶನ ನೀಡುವ ಚೆನ್ನಕೇಶವನ ನೋಡುವುದು ಸಡಗರವಾದರೆ ಮೀತ್ತೂರು ನಾಯರ್ ದೈವದ ಕುರಿತಾಗಿ ಇರುವ ಭಯ. ಒಟ್ಟಾರೆ ಜಾತ್ರೆ ಎಂಬುದು ದೈವ ಭಕ್ತರೀಗೆ ಸಡಗರದ ದಿನವಾದರೆ ಅದೆಷ್ಟೋ ಕುಟುಂಬಗಳು ಹೊಟ್ಟೆಪಾಡಿಗೆ ಸಂತೆ ಅಂಗಡಿ ತೆರೆದು ವ್ಯಾಪಾರ ಮಾಡಿ ಬದುಕು ಸಾಗಿಸಲು ಸಹಕರಿಯಾಗಿದೆ. ಇನೊಂದು ನೆಲೆಗಟ್ಟಿನಲ್ಲಿ ನೋಡುವಾಗ ಜನರಲ್ಲಿ ಒಗ್ಗಟ್ಟು ಮೂಡುವಲ್ಲಿ ಜಾತ್ರೆಯು ಪ್ರಮುಖ ಸ್ಥಾನ ಪಡೆದಿದೆ ಅದೆಷ್ಟೋ ಸಂಘ ಸಮಿತಿಗಳು ಜಾತ್ರೆಯ ಕಾರಣ ದಿಂದ ಹುಟ್ಟಿಕೊಂಡಿದೆ ಎಂದರೆ ತಪ್ಪಾಗಲಾರದು..
ಜಾತ್ರೆಯ ಸಡಗರವನ್ನು ಉತ್ಸಹದಿಂದ ಬರಮಾಡಿಕೊಳ್ಳೋಣ ಚೆನ್ನಕೇಶವ ದೇವರು ಮತ್ತು ಸರ್ವ ದೈವ ದೇವರ ಆಶೀರ್ವಾದ ಪಡೆದುಕೊಳುವುದರ ಜೊತೆಗೆ ನಮ್ಮನ್ನೇ ನಂಬಿ ದೂರದ ಊರಿನಿಂದ ನಮ್ಮ ಊರಿಗೆ ಬಂದು ಜಾತ್ರೆಯ ಮೆರಗನ್ನು ಹೆಚ್ಚಿಸುವ ಸಂತೆ ವ್ಯಾಪಾರಿಗಳಿಗೆ ನಮ್ಮ ಕೈಲಾದಷ್ಟು ವ್ಯಾಪಾರ ಮಾಡಿ ಸಹಕರಿಸೋಣ..
... ಧನ್ಯವಾದಗಳು..
ಬರಹ : ದುರ್ಗಾ ಪ್ರಸಾದ್ ಪೂಜಾರಿ ಬೂಡು ಮನೆ ಸುಳ್ಯ
GFGC BELLARE PERUVAJE
Comments