ಫೆಂಗಲ್ ಚಂಡಮಾರುತದ ಹೊಡೆತ: ಹಳ್ಳಿಗಳಿಗೆ ತಾಳುವ ಶಕ್ತಿ, ನಗರಗಳಿಗೆ ಸಂಕಷ್ಟ
ಫೆಂಗಲ್ ಚಂಡಮಾರುತದ ಹೊಡೆತ: ಹಳ್ಳಿಗಳಿಗೆ ತಾಳುವ ಶಕ್ತಿ, ನಗರಗಳಿಗೆ ಸಂಕಷ್ಟ

ಸೈಕ್ಲೋನ್ ಪ್ರಭಾವ:
ಫೆಂಗಲ್ ಚಂಡ ಮಾರುತದಿಂದ ಕೃಷಿಕರಿಗೆ ಮಾತ್ರ ಅಲ್ಲ ಸಾಮಾನ್ಯ ಜನರಿಗೆ ಕೂಡ ಪ್ರಭಾವ ಬಿದ್ದಿದೆ.. ಹೇಗೆಂದರೆ ನಾವೆಲ್ಲ ಹಳ್ಳಿ ಕಡೆ ಮನೆಗೆ ಖರ್ಚಿಗೆ ಉಪಯೋಗ ಆಗುವಷ್ಟು ತರಕಾರಿ ವಿಧ ವಿಧ ದು ಬೆಳೆಸುತ್ತೇವೆ ಉದಾಹರಣೆಗೆ..ಹಳ್ಳಿ ಕಡೆ ಈ ಬಸಳೆ, ಹರಿವೆ ಸೊಪ್ಪು,ಬದನೆ, ಬೆಂಡೆಕಾಯಿ, ಅಲಸಂಡೆ ನಮ್ಮ ಖರ್ಚಿಗೆ ಉಪಯೋಗ ಆಗುವಷ್ಟು ನಾವು ಬೆಳೆಯುದರಿಂದ ನಮಗೆ ಅಂತ ಎಫೆಕ್ಟ್ ಆಗುದಿಲ್ಲ..ಆದರೆ ಸಿಟಿ ಯಲ್ಲಿ ಜೀವನ ನಡೆಸುವರಿಗೆ ಜೀಬಿಗೆ ಕತ್ತರಿ ಬೀಳುವಂತಾಗಿದೆ..ನಮ್ಮ ಹಳ್ಳಿ ಕಡೆ ನಾವು ಹೇಗೆಂದರೆ ರೇಟ್ ಜಾಸ್ತಿ ಇದ್ದಾಗ ನಮಗೆ ಟೊಮೆಟೊ ಆಗ್ಲಿ , ಈರುಳ್ಳಿ ಆಗಲಿ,600ದಾಟಿರುವ ಬೆಳ್ಳುಳಿ ಆಗಲಿ ನಾವು ಉಪಯೋಗ ಕಡಿಮೆ ಮಾಡ್ತೇವೆ.. ನಮ್ಮ ಕಡೆ ಮಸಾಲೆ ಗೆ ಎಲ್ಲಾ ಬೆಳ್ಳುಳ್ಳಿ ಅಷ್ಟಾಗಿ ಅವಶ್ಯಕತೆ ಇರುವುದಿಲ್ಲ.. ಮಾಂಸಾಹಾರಕ್ಕೆಲ್ಲ ಅದರ ಅವಶ್ಯಕತೆ ಇರಬಹುದು.. ಹಳ್ಳಿಯವರು ಹೇಗೆ ಬೇಕಾದ್ರೂ ಜೀವನ ಸ್ವಲ್ಪ ಆರಮದಲ್ಲಿ ಜೀವನ ನಡೆಸಬಹುದು ಏನೂ ಇಲ್ಲದಿದ್ದರೂ ತೋಟಕ್ಕೆ ಹೋದರೆ,"ತಿಮರೆ,"ಬಾಳೆ ಹೂ,ಬಾಳೆದಿಂಡು ಅದನೆಲ್ಲಾ ತಂದು ಚಟ್ನಿ ಯ ,ಪಲ್ಯ ವ ಮಾಡ್ತೇವೆ..ಆದರೆ ದೊಡ್ಡ ದೊಡ್ಡ ಸಿಟಿ ಯಲ್ಲಿ ಇದ್ದವರಿಗೆ ಅದರ ಎಫೆಕ್ಟ್ ತುಂಬಾ..ನೀವೇ ಯೋಚಿಸಿ ಬೆಂಗಳೂರು ಅಂತ ದೊಡ್ಡ ದೊಡ್ಡ ನಗರದಲ್ಲಿ ಇದ್ದವರಿಗೆ 1kg ಟೊಮ್ಯಾಟೊ ಬೆಲೆ 50, ಬೆಳ್ಳುಳ್ಳಿ ಕ್ರಯ ಕೆ. ಜಿ.ಗೆ600.., ಕ್ಯಾರೆಟ್ 80.. ಬಟಾಣಿ ಗೆ kg 200.ಆದಾಗ ಜನ ಸಾಮಾನ್ಯರ ಜೀವನ ಎಷ್ಟು ಕಷ್ಟ ಅಂತ ನೀವೇ ಊಹಿಸಿ..ನಾವೇ ಪುಣ್ಯವಂತರು ಸ್ವಲ್ಪ ಹಳ್ಳಿ ಕಡೆ ಇದ್ದದರಿಂದ ಏನು ಹೇಳ್ತೀರಿ?
ಬರಹ:ಆಶಾ ನಾಯಕ್
ಕೃಷಿಕೆ:
Comments