ನಾನ್‌ವೆಜ್ ಪ್ರಿಯರೇ ಬಿರಿಯಾನಿ ತಿನ್ನುವ ಮುನ್ನ ಎಚ್ಚರ...!!
ನಾನ್‌ವೆಜ್ ಪ್ರಿಯರೇ ಬಿರಿಯಾನಿ ತಿನ್ನುವ ಮುನ್ನ ಎಚ್ಚರ...!!

ಮುಂಬೈನ ಕುರ್ಲಾದ 34 ವರ್ಷದ ರೂಬಿ ತನ್ನ ಕುಟುಂಬದೊಂದಿಗೆ ರೆಸ್ಟೋರೆಂಟ್ ಒಂದಕ್ಕೆ ಊಟ ಮಾಡಲು ಹೋಗಿದ್ದು, ಅಲ್ಲಿ ಅವರು ತಮ್ಮಿಷ್ಟದ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಮತ್ತು ಬಿರಿಯಾನಿ ತಿನ್ನುವಾಗ ಚಿಕನ್ ಮೂಳೆ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ. ಬಳಿಕ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಎದುರಾಯಿತು. ನಂತರ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಮೂಳೆ ಹೊರ ತೆಗೆದಿದ್ದಾರೆ. ಚಿಕನ್ ಬಿರಿಯಾನಿ ತಂದ ಸಂಕಷ್ಟದಿಂದ 8 ಲಕ್ಷ ರೂ. ಖರ್ಚಾಗಿದ್ದು, ಇನ್ನು ಮುಂದೆ ನಾನು ಬಿರಿಯಾನಿ ತಿನ್ನುವುದಿಲ್ಲ, ಜೊತೆಗೆ ಮನೆಯಲ್ಲಿ ಬಿರಿಯಾನಿ ಮಾಡುವುದು ಇಲ್ಲ ಎಂದು ರೂಬಿ ತಮ್ಮ ಪತಿಗೆ ಹೇಳಿದ್ದಾರೆ.
ಫೆಬ್ರವರಿ 3 ರಂದು ರೂಬಿ ಗಂಟಲು ನೋವಿನಿಂದಾಗಿ ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ದಾಖಲಾದಾಗ ಎಕ್ಸ್-ರೇ ಸ್ಕ್ಯಾನ್ ಮಾಡಿದಾಗ ಆಕೆಯ ಕುತ್ತಿಗೆಯಲ್ಲಿ ವಿಚಿತ್ರ ವಸ್ತುವೊಂದು ಸಿಲುಕಿಕೊಂಡಿರುವುದು ಕಂಡುಬಂದಿದೆ. ಇದಾದ ನಂತರ, ವೈದ್ಯರು ರೂಬಿಯನ್ನು ಅಡ್ಮಿಟ್ ಆಗುವಂತೆ ಕೇಳಿದಾಗ, ಅವರು ಇದಕ್ಕೆ ನಿರಾಕರಿಸಿದ್ದಾರೆ. ಎರಡು ದಿನಗಳ ನಂತರ, ರೂಬಿ ಜ್ವರ, ಅಧಿಕ ರಕ್ತದೊತ್ತಡ ಮತ್ತು ಸೋಂಕಿನ ಕಾರಣದಿಂದ ಮತ್ತೆ ಆಸ್ಪತ್ರೆಗೆ ಬಂದಿದ್ದು, ಈ ಬಾರಿ ಎಂಡೋಸ್ಕೋಪಿ ಮತ್ತು ಸಿಟಿ ಸ್ಕ್ಯಾನ್ ಮಾಡಿದಾಗ ಅನ್ನನಾಳದಲ್ಲಿ ಏನೋ ಸಿಲುಕಿರುವುದನ್ನು ವೈದ್ಯರು ಗಮನಿಸುತ್ತಾರೆ. ನಂತರ ರೂಬಿಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಿದಾಗ, ಎರಡು ಗಂಟೆಗಳಲ್ಲಿ ಆಪರೇಷನ್ ಮುಗಿಯುತ್ತದೆ ಎಂದು ಭಾವಿಸಿದ್ದರು. ಆದರೆ ರೂಬಿಯ ಆಪರೇಷನ್ ಎಷ್ಟು ಕಷ್ಟಕರವಾಯಿತೆಂದರೆ ಗಂಟಲಲ್ಲಿ ಸಿಲುಕಿದ್ದ ಚಿಕನ್ ಮೂಳೆಯನ್ನು ಹೊರ ತೆಗೆಯಲು ಎಂಟು ಗಂಟೆಗಳು ಬೇಕಾಯಿತು.

Comments