ಕೇಂದ್ರ ಬಜೆಟ್ 2025 : ಕೃಷಿ ವಲಯಕ್ಕೆ ಭರಪೂರ ಕೊಡುಗೆ
ಕೇಂದ್ರ ಬಜೆಟ್ 2025 : ಕೃಷಿ ವಲಯಕ್ಕೆ ಭರಪೂರ ಕೊಡುಗೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-2026ರ ಆರ್ಥಿಕ ವರ್ಷಕ್ಕೆ ತಮ್ಮ ಸತತ 8ನೇ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದು, ಕೃಷಿ ವಲಯಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ.
ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಧನಧಾನ್ಯ ಯೋಜನೆ ವಿಸ್ತರಣೆ ಮಾಡುವ ಮೂಲಕ ಮುಂದಿನ ಐದು ವರ್ಷಗಳಲ್ಲಿ 1.7 ಕೋಟಿ ರೈತರಿಗೆ ಇದರ ನೆರವು ಸಿಗಲಿದೆ ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಇದರ ಜೊತೆಯಲ್ಲೇ ಕಿಸಾನ್ ಕ್ರೆಡಿಟ್ ಕಾರ್ಡ್ ನ ಸಾಲ ಮಿತಿ ಹೆಚ್ಚಳ, ಬಿಹಾರದಲ್ಲಿ ಮಖಾನಾ ಬೀಜ (ತಾವರೆ ಬೀಜ) ಘಟಕ ಸ್ಥಾಪನೆ, ಭಾರತದ ಮೂರು ಕಡೆಗಳಲ್ಲಿ ಯೂರಿಯಾ ಉತ್ಪಾದನಾ ಕಾರ್ಖಾನೆಗಳನ್ನು ಆರಂಭಿಸುವುದು, ಆತ್ಮನಿರ್ಭರ ಭಾರತ ಮೂಲಕ ಕೃಷಿ ವಲಯದ ಸ್ಟಾರ್ಟ್ ಅಪ್ ಗಳಿಗೆ 10ರಿಂದ 20 ಕೋಟಿ ರೂ. ಸಾಲ ಸೌಲಭ್ಯ, ಮೈಕ್ರೋ ಕಂಪನಿಗಳಿಗೆ ಕ್ರೆಡಿಟ್ ಕಾರ್ಡ್ ವಿತರಣೆ ಮುಂತಾದ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಲಾಗಿದೆ.
Comments