ಪಾಕ್ ವೇಗಿಯ ಶೂ ಲೇಸ್ ಕಟ್ಟಿದ ಕೊಹ್ಲಿ ; ಕೊಹ್ಲಿಯ ಸರಳತೆಗೆ ಸಲಾಂ ಹೊಡೆದ ವಿಶ್ವ ಕ್ರಿಕೆಟ್
ಪಾಕ್ ವೇಗಿಯ ಶೂ ಲೇಸ್ ಕಟ್ಟಿದ ಕೊಹ್ಲಿ ; ಕೊಹ್ಲಿಯ ಸರಳತೆಗೆ ಸಲಾಂ ಹೊಡೆದ ವಿಶ್ವ ಕ್ರಿಕೆಟ್

ಪಾಕಿಸ್ತಾನ ತಂಡದ ಯುವ ವೇಗದ ಬೌಲರ್ ನಸೀಮ್ ಶಾ ಬ್ಯಾಟಿಂಗ್ ಮಾಡುವ ವೇಳೆ ಅವರ ಶೂ ಲೇಸ್ ಕಳಚಿತ್ತು. ಇದನ್ನು ನೋಡಿದ ಕೊಹ್ಲಿ ನಸೀಮ್ ಬಳಿಗೆ ಬಂದು ಬಿಚ್ಚಿದ್ದ ಶೂ ಲೇಸ್ ಅನ್ನು ಸರಿಯಾಗಿ ಕಟ್ಟಿ ಅಲ್ಲಿಂದ ನಿರ್ಗಮಿಸಿದರು. ಇದೀಗ ಕೊಹ್ಲಿ, ನಸೀಮ್ ಅವರ ಶೂ ಲೇಸ್ ಕಟ್ಟುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಕ್ರಿಕೆಟ್ ಆಡುವ ಎರಡು ರಾಷ್ಟ್ರಗಳ ನಡುವಿನ ಪರಸ್ಪರ ಗೌರವವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕೊಹ್ಲಿಯ ಈ ನಡೆಯನ್ನು ಕ್ರೀಡಾ ಮನೋಭಾವದ ನಿಜವಾದ ಪ್ರತಿಬಿಂಬ ಎಂದು ಹಲವರು ಕರೆದರೆ, ಇನ್ನು ಕೆಲವರು ಮೈದಾನದಲ್ಲಿ ಸ್ಪರ್ಧೆ ತೀವ್ರವಾಗಿದ್ದರೂ, ಕ್ರೀಡಾ ಮನೋಭಾವವು ಕ್ರಿಕೆಟ್‌ನ ಮೂಲ ಮೌಲ್ಯವಾಗಿ ಉಳಿದಿದೆ ಎಂದಿದ್ದಾರೆ.

Comments