ಸುಳ್ಯ : ಕೋರ್ ಟೆಕ್ನಾಲಜೀಸ್ ಸಂಸ್ಥೆ ಸ್ಥಳಾಂತರಗೊಂಡು ಶುಭಾರಂಭ
ಸುಳ್ಯ : ಕೋರ್ ಟೆಕ್ನಾಲಜೀಸ್ ಸಂಸ್ಥೆ ಸ್ಥಳಾಂತರಗೊಂಡು ಶುಭಾರಂಭ

ಸುಳ್ಯದಲ್ಲಿ ಹಲವು ವರ್ಷಗಳಿಂದ ತಾಲೂಕಿನಾದ್ಯಂತ ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ ಗಳನ್ನು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ನೀಡುತ್ತಾ ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ “ಕೋರ್ ಟೆಕ್ನಾಲಜೀಸ್ ಸಂಸ್ಥೆ”ಯು ಇದೀಗ “ಸುಳ್ಯ ಕೆ.ಎಸ್.ಆರ್.ಟಿ.ಸಿ ಮುಂಬಾಗದ ಸೂಂತೋಡು ಎಂಪೋರಿಯಂ” ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಇದರ ಶುಭಾರಂಭ ಕಾರ್ಯಕ್ರಮವು ಡಿ.09 ಸೋಮವಾರದಂದು ನಡೆಯಿತು.
ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ| ಉಜ್ವಲ್ ಯು.ಜೆ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸೂಂತೋಡು ಎಂಪೋರಿಯಂ ನ ಮ್ಹಾಲಕರಾದ ಸೂರಯ್ಯ ಗೌಡ, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರಾದ ಪಿ.ಬಿ ಸುಧಾಕರ ರೈ, ವೆಹಿಕಲ್ಸ್ ಇಂಡಿಯಾ ಸಂಸ್ಥೆಯ ಮ್ಹಾಲಕರಾದ ರಮಾನಾಥ್.ಕೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೋರ್ ಟೆಕ್ನಾಲಜೀಸ್ ಸಂಸ್ಥೆಯ ಮ್ಹಾಲಕರಾದ ಅನೂಪ್ ಗೌಡ ಕೆ.ಜೆ “ಗ್ರಾಮೀಣ ಭಾಗದ ಜನರಿಗೂ ಕೂಡ ಕಡಿಮೆ ವೆಚ್ಚದಲ್ಲಿ, ಕೈಗೆಟುಕುವ ದರದಲ್ಲಿ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಗಳನ್ನು ಒದಗಿಸಿಕೊಡುವುದರೊಂದಿಗೆ ಉತ್ತಮವಾದ ಸರ್ವೀಸ್ ಗಳನ್ನು ನೀಡಬೇಕೆನ್ನುವ ನಿಟ್ಟಿನಲ್ಲಿ ನಾವು ಈ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ಅದೇ ರೀತಿ ನವೀಕರಣಗೊಂಡ/ಬಳಸಿದ ಲ್ಯಾಪ್ ಟಾಪ್ ಗಳನ್ನು ಅತೀ ಕಡಿಮೆ ಬೆಲೆಗೆ ಜನರಿಗೆ ತಲುಪಿಸುವುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ತಾವೆಲ್ಲರೂ ಕೂಡ ಈ ಹಿಂದೆ ಸಹಕಾರ ನೀಡಿದಂತೆ ಇನ್ನು ಮುಂದೆಯೂ ಕೂಡ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ” ಎಂದರು.
ವಿ.ಜೆ ವಿಖ್ಯಾತ್ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ಸಂಸ್ಥೆಯ ಬಗ್ಗೆ : “ಕೋರ್ ಟೆಕ್ನಾಲಜೀಸ್” ಎನ್ನುವುದು ಕೈಗೆಟುಕುವ ದರದಲ್ಲಿ ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ ಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡ ಸಂಸ್ಥೆಯಾಗಿದ್ದು, ಸುಳ್ಯ ಸೇರಿದಂತೆ ಮಂಗಳೂರು ಹಾಗೂ ಪುತ್ತೂರಿನಲ್ಲೂ ಕೂಡ ಇದರ ಸಹ ಸಂಸ್ಥೆಗಳಿದ್ದು, ಜನರು ಕೈಗೆಟುಕುವ ದರದಲ್ಲಿ ಹೊಸ ಅಥವಾ ನವೀಕರಣಗೊಂಡ/ಬಳಸಿದ ಲ್ಯಾಪ್ ಟಾಪ್ ಗಳನ್ನು ಖರೀದಿಸಬಹುದು.
“ಕೋರ್ ಟೆಕ್ನಾಲಜೀಸ್ ಮಂಗಳೂರು” ಸಂಸ್ಥೆಯ ವಿಳಾಸ : ಮೊದಲನೇ ಮಹಡಿ, ಕಂಕನಾಡಿ ಗೇಟ್ ಬಿಲ್ಡಿಂಗ್, ಕಂಕನಾಡಿ ಬೈಪಾಸ್ ರಸ್ತೆ
“ಕೋರ್ ಟೆಕ್ನಾಲಜೀಸ್ ಪುತ್ತೂರು” ಸಂಸ್ಥೆಯ ವಿಳಾಸ : ಮಹಾಲಸಾ ಆರ್ಕೇಡ್ ಮುಖ್ಯ ರಸ್ತೆ ಪುತ್ತೂರು
Comments