ನಿವೃತ್ತಿ ವದಂತಿಯ ಬಗ್ಗೆ ಮೌನ ಮುರಿದ ರವೀಂದ್ರ ಜಡೇಜಾ...!
ನಿವೃತ್ತಿ ವದಂತಿಯ ಬಗ್ಗೆ ಮೌನ ಮುರಿದ ರವೀಂದ್ರ ಜಡೇಜಾ...!

ಮಾರ್ಚ್ 09ರ ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಮಾಡಿದರು. ಈ ಸ್ಟಾರ್ ಆಲ್‌ರೌಂಡರ್ ತಮ್ಮ 10 ಓವರ್‌ಗಳ ಖೋಟಾದಲ್ಲಿ ಕೇವಲ 30 ರನ್‌ಗಳನ್ನು ನೀಡಿ ಟಾಮ್ ಲ್ಯಾಥಮ್ ಅವರ ವಿಕೆಟ್ ಪಡೆದರು. ಆದರೆ ಈ ಪಂದ್ಯದಲ್ಲಿ ಜಡೇಜಾ ತಮ್ಮ ಖೋಟಾದ ಕೊನೆಯ ಓವರ್ ಬೌಲ್ ಮಾಡಿದ ಬಳಿಕ ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ಜಡೇಜಾ ಅವರನ್ನು ಅಪ್ಪಿಕೊಂಡಿದ್ದರು. ಇದು ಅಭಿಮಾನಿಗಳಲ್ಲಿ ಈ ಪಂದ್ಯದ ನಂತರ ಜಡೇಜಾ ನಿವೃತ್ತಿ ಹೊಂದಬಹುದೆಂಬ ಅನುಮಾನವನ್ನು ಸೃಷ್ಟಿಸಿತ್ತು.
ಆದರೆ ಈಗ ಸ್ವತಃ ಜಡೇಜಾ ಅವರೇ ಈ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ. ಮಾರ್ಚ್ 10 ರಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಒಂದು ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಜಡೇಜಾ, "ಅನಗತ್ಯ ವದಂತಿಗಳು ಬೇಡ, ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ಜಡೇಜಾ ಅವರ ಈ ಪೋಸ್ಟ್ ಅನ್ನು ನೋಡಿದ ಅಭಿಮಾನಿಗಳು, ಜಡೇಜಾ ನಿವೃತ್ತಿಯ ವದಂತಿಯ ಬಗ್ಗೆಯೇ ಈ ಪೋಸ್ಟ್ ಬರೆದಿದ್ದಾರೆ ಎಂದು ಹೇಳ ತೊಡಗಿದ್ದಾರೆ. ಹಾಗೆಯೇ ತಮ್ಮ ನೆಚ್ಚಿನ ಆಟಗಾರ ನಿವೃತ್ತಿ ಹೊಂದುತ್ತಿಲ್ಲ ಎಂಬ ವಿಷಯ ತಿಳಿದ ಬಳಿಕ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Comments