ಸೈಬರ್ ವಂಚನೆ ವೇಳೆ ಗ್ರಾಹಕನ ಖಾತೆಯಲ್ಲಿ ನಡೆಯುವ ವಹಿವಾಟಿಗೆ ಬ್ಯಾಂಕೇ ಹೊಣೆ, ಗ್ರಾಹಕನ ಹಿತಾಸಕ್ತಿ ಕಾಪಾಡುವುದು ಬ್ಯಾಂಕ್‌ಗಳ ಕರ್ತವ್ಯ : ಸುಪ್ರೀಂಕೋರ್ಟ್
ಸೈಬರ್ ವಂಚನೆ ವೇಳೆ ಗ್ರಾಹಕನ ಖಾತೆಯಲ್ಲಿ ನಡೆಯುವ ವಹಿವಾಟಿಗೆ ಬ್ಯಾಂಕೇ ಹೊಣೆ, ಗ್ರಾಹಕನ ಹಿತಾಸಕ್ತಿ ಕಾಪಾಡುವುದು ಬ್ಯಾಂಕ್‌ಗಳ ಕರ್ತವ್ಯ : ಸುಪ್ರೀಂಕೋರ್ಟ್
ಗ್ರಾಹಕನ ಹಿತಾಸಕ್ತಿ ಕಾಪಾಡುವುದು ಬ್ಯಾಂಕ್‌ಗಳ ಕರ್ತವ್ಯ. ಸೈಬರ್ ವಂಚನೆ ವೇಳೆ ಗ್ರಾಹಕನ ಖಾತೆಯಲ್ಲಿ ನಡೆಯುವ ವಹಿವಾಟಿಗೆ ಬ್ಯಾಂಕೇ ಹೊಣೆಗಾರಿಕೆಯನ್ನು ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರಕರಣವೊಂದರಲ್ಲಿ ಸೈಬರ್ ವಂಚನೆಯಿಂದ ಹಣ ಕಳೆದುಕೊಂಡಿದ್ದ ಗ್ರಾಹಕನಿಗೆ 94,204 ರೂ. ಹಣವನ್ನು ನೀಡುವಂತೆಯೂ ಎಸ್‌ಬಿಐಗೆ ಸೂಚಿಸಿದೆ.
ಅಸ್ಸಾಂನ ವ್ಯಕ್ತಿಯೊಬ್ಬರು ಆನ್‌ಲೈನ್ ಮೂಲಕ ಖರೀದಿಸಿದ್ದ ವಸ್ತವನ್ನು ಹಿಂದಿರುಗಿಸಲು ಮುಂದಾದರು. ಆಗ ಕಸ್ಟಮರ್ ಕೇರ್ ನೆಪದಲ್ಲಿ ಕರೆ ಮಾಡಿದ ವ್ಯಕ್ತಿಯ ವಂಚನೆ ಎಸಗಿ, ವಕ್ತಿಯ ಖಾತೆಯಲ್ಲಿದ್ದ ಹಣವನ್ನು ಎಸಗಿದ್ದರು. ಈ ಕುರಿತು ಎಸ್‌ಬಿಐ ಬ್ಯಾಂಕ್‌ಗೆ ವ್ಯಕ್ತಿ ದೂರು ನೀಡಿದ್ದರು. ಆದರೆ ಬ್ಯಾಂಕ್ ಇದು ನಮ್ಮಿಂದಾದ ತಪ್ಪಲ್ಲ. ಹಾಗಾಗಿ ಹಣ ಹಿಂದಿರುಗಿಸುವುದಿಲ್ಲ ಎಂದಿತ್ತು. ಅದನ್ನು ಪ್ರಶ್ನಿಸಿ ವ್ಯಕ್ತಿ ಅಸ್ಸಾಂ ಹೈ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ವೇಳೆ, ಕೋರ್ಟ್ ಸಂತ್ರಸ್ತ ಪರ ತೀರ್ಪು ನೀಡಿ, ಹಣ ನೀಡುವಂತೆ ಎಸ್‌ಬಿಐಗೆ ಸೂಚಿಸಿತ್ತು. ಅದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿ ಎಸ್‌ಬಿಐ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸುಪ್ರೀಂ ಕೂಡ ಗ್ರಾಹಕನ ಪರ ತೀರ್ಪು ನೀಡಿದೆ.
Коментарі