ಬಿಸಿಲಿಗೆ ಹೈರಾಣಾದ ಜನ ; ಉಲ್ಬಣಗೊಂಡ ವಾಂತಿ, ಜ್ವರ, ಜಾಂಡೀಸ್
ಬಿಸಿಲಿಗೆ ಹೈರಾಣಾದ ಜನ ; ಉಲ್ಬಣಗೊಂಡ ವಾಂತಿ, ಜ್ವರ, ಜಾಂಡೀಸ್

ಬಿಸಿಲಿನ ತಾಪಮಾನದಿಂದ ಚಿಕ್ಕಬಳ್ಳಾಪುರದ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ವೃದ್ದರಲ್ಲಿ ವಾಂತಿ, ಬೇದಿ, ಜಾಂಡೀಸ್ ಉಲ್ಬಣಗೊಂಡಿದೆ. ಇದರಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಜಂಗುಳಿ ಉಂಟಾಗಿದೆ. ಮದ್ಯಾಹ್ನವಾಗುತ್ತಿದ್ದಂತೆ 36 ರಿಂದ 38 ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನ ದಾಖಲಾಗುತ್ತಿದೆ. ಇದರಿಂದ ಮಕ್ಕಳು, ಬಾಣಂತಿಯರು, ವೃದ್ದರಲ್ಲಿ ಡಿ ಹೈಡ್ರೇಶನ್ ಉಂಟಾಗಿ ಜ್ವರ, ವಾಂತಿ, ಬೇದಿ, ಜಾಂಡೀಸ್‍ನಂತ ಕಾಯಿಲೆಗಳು ಬರುತ್ತಿವೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಜನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ಜನಜಂಗುಳಿ ಉಂಟಾಗಿದೆ.

Opmerkingen