ಯಾವಾಗ ತೆರೆಯುತ್ತದೆ ಕೇದಾರನಾಥ ದೇವಾಲಯದ ಬಾಗಿಲು...!?
ಯಾವಾಗ ತೆರೆಯುತ್ತದೆ ಕೇದಾರನಾಥ ದೇವಾಲಯದ ಬಾಗಿಲು...!?

ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥವು ಮೇ 02ರಂದು ತೆರೆಯಲಿದೆ. ಈ ದೇವಾಲಯವು ಬದರಿನಾಥ ದೇವಾಲಯ, ಗಂಗೋತ್ರಿ ದೇವಾಲಯ ಮತ್ತು ಯಮುನೋತ್ರಿ ದೇವಾಲಯವನ್ನು ಒಳಗೊಂಡಿರುವ ಚಾರ್ ಧಾಮ್ ಯಾತ್ರೆಯ ಭಾಗವಾಗಿದೆ. ಚಾರ್ ಧಾಮ್ ಯಾತ್ರೆ ಏಪ್ರಿಲ್ 30ರಂದು ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ದ್ವಾರಗಳನ್ನು ತೆರೆಯುವುದರೊಂದಿಗೆ ಪ್ರಾರಂಭವಾಗಲಿದೆ.
ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಸಿಇಒ ವಿಜಯ್ ಪ್ರಸಾದ್ ಥಾಪ್ಲಿಯಾಲ್ ಅವರು ಕೇದಾರನಾಥ ದೇವಾಲಯದ ದ್ವಾರಗಳನ್ನು ಮೇ 02ರಂದು ಬೆಳಿಗ್ಗೆ 7:00 ಗಂಟೆಗೆ ತೆರೆಯಲಾಗುವುದು ಎಂದು ಘೋಷಿಸಿದ್ದಾರೆ. ಫೆಬ್ರವರಿ 26ರಂದು ಮಹಾಶಿವರಾತ್ರಿಯ ಶುಭ ದಿನದಂದು ಉಖಿಮಠದ ಓಂಕಾರೇಶ್ವರ ದೇವಾಲಯದಲ್ಲಿ ಶಿವನನ್ನು ಪೂಜಿಸಿದ ನಂತರ ಈ ದಿನಾಂಕವನ್ನು ನಿರ್ಧರಿಸಲಾಯಿತು.
ಗಂಗೋತ್ರಿ ದೇವಾಲಯ ಮತ್ತು ಯಮುನೋತ್ರಿ ದೇವಾಲಯವು ಏಪ್ರಿಲ್ 30ರಂದು ಅಕ್ಷಯ ತೃತೀಯದ ಶುಭ ದಿನದಂದು ತೆರೆಯುತ್ತದೆ. ಕೇದಾರನಾಥ ದೇವಾಲಯವು ಮೇ 02ರಂದು ಮತ್ತು ಬದರೀನಾಥ ದೇವಾಲಯವು ಮೇ 04ರಂದು ತೆರೆಯುತ್ತದೆ. ಗಂಗೋತ್ರಿ ದೇವಾಲಯವು ಗಂಗಾ ದೇವಿಗೆ ಮತ್ತು ಯಮುನೋತ್ರಿ ದೇವಾಲಯವು ಯಮುನೋತ್ರಿ ದೇವಿಗೆ ಸಮರ್ಪಿತವಾಗಿದೆ. ಕೇದಾರನಾಥ ದೇವಾಲಯವು ಶಿವನಿಗೆ ಮತ್ತು ಬದರೀನಾಥ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿದೆ.

Comments