ಮುಚ್ಚುವ ಹಂತದಲ್ಲಿದ್ದ ಶಾಲೆಗೆ ತನ್ನ ಮಗಳನ್ನು ದಾಖಲು ಮಾಡಿ ಶಾಲೆ ಉಳಿಸಿಕೊಂಡ ಬಿಸಿಯೂಟ ತಯಾರಕಿ
ಮುಚ್ಚುವ ಹಂತದಲ್ಲಿದ್ದ ಶಾಲೆಗೆ ತನ್ನ ಮಗಳನ್ನು ದಾಖಲು ಮಾಡಿ ಶಾಲೆ ಉಳಿಸಿಕೊಂಡ ಬಿಸಿಯೂಟ ತಯಾರಕಿ

ಮುಚ್ಚುವ ಹಂತದಲ್ಲಿದ್ದ ಶಾಲೆಗೆ ತನ್ನ ಮಗಳನ್ನು ದಾಖಲು ಮಾಡುವ ಮೂಲಕ ಬಿಸಿಯೂಟ ತಯಾರಕಿ ಆ ಶಾಲೆಯನ್ನು ಉಳಿಸಿಕೊಂಡಿದ್ದಾರೆ.
ಶಿರಾ ತಾಲೂಕಿನ ಮದ್ದೇವನಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳೆದ ಮೂರು ವರ್ಷಗಳಿಂದ ಯಾವುದೇ ವಿದ್ಯಾರ್ಥಿ ದಾಖಲಾಗಿಲ್ಲ. ಹೀಗಾಗಿ ಶಾಲೆ ಮುಚ್ಚುವ ಸ್ಥಿತಿಗೆ ಬಂದಿತ್ತು. ಅದೇ ಶಾಲೆಯಲ್ಲಿರುವ ಬಿಸಿಯೂಟ ತಯಾರಕಿ ತನ್ನ ಮಗಳನ್ನು ಈ ವರ್ಷ ಒಂದನೇ ತರಗತಿಗೆ ದಾಖಲಿಸಿದ್ದು ಮುಚ್ಚುವ ಭೀತಿಯಿಂದ ಶಾಲೆ ಪಾರಾಗಿದೆ. ಈಗ ಈ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ, ಒಬ್ಬ ಶಿಕ್ಷಕಿ, ಒಬ್ಬ ಅಡುಗೆ ತಯಾರಕಿ ಮಾತ್ರ ಇದ್ದು, ಕೇವಲ ಒಬ್ಬ ವಿದ್ಯಾರ್ಥಿನಿಗಾಗಿ ಸರಕಾರಿ ಶಾಲೆ ನಡೆಸಲಾಗುತ್ತಿದೆ.
ಶಾಲೆಯಲ್ಲಿ ಸುಸಜ್ಜಿತವಾದ ಕಟ್ಟಡ, ಬಿಸಿಯೂಟ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯ ಇದ್ದರೂ ಇಲ್ಲಿ ವಿದ್ಯಾರ್ಥಿಗಳೇ ಇಲ್ಲ. ಒಂದನೇ ತರಗತಿಗೆ ಒಬ್ಬ ವಿದ್ಯಾರ್ಥಿನಿ ಮಾತ್ರ 2024-25 ಸಾಲಿನಲ್ಲಿ ದಾಖಲಾಗಿದ್ದರೆ, ಉಳಿದ 2 ರಿಂದ 5ನೇ ತರಗತಿಯವರೆಗೆ ಯಾವುದೇ ವಿದ್ಯಾರ್ಥಿಗಳು ಇಲ್ಲ. ಸರಕಾರ, ಉಚಿತ ಶಿಕ್ಷಣದ ಜತೆಗೆ ಬಿಸಿಯೂಟ, ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕ ಉಚಿತವಾಗಿ ನೀಡಿದರೂ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳ ಕಡೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಿದ್ದಾರೆ.

Comentários