ಗಿನ್ನೆಸ್ ದಾಖಲೆಗೆ ಭಾಜನರಾದ 108 ವರ್ಷದ ಹಿರಿ ಜೀವ...!
ಗಿನ್ನೆಸ್ ದಾಖಲೆಗೆ ಭಾಜನರಾದ 108 ವರ್ಷದ ಹಿರಿ ಜೀವ...!

ಸುದೀರ್ಘ 94 ವರ್ಷಗಳಿಂದ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿರುವ ಜಪಾನಿನ ಶಿಟ್ಸುಯಿ ಹಕೋಯಿಶಿ ಎಂಬ 108 ವರ್ಷ ವಯಸ್ಸಿನ ಅಜ್ಜಿ ವಿಶ್ವದ ಅತ್ಯಂತ ಹಿರಿಯ ಮಹಿಳಾ ಕ್ಷೌರಿಕ ಎಂಬ ಬಿರುದನ್ನು ಗಳಿಸಿದ್ದಾರೆ. ಮಾರ್ಚ್ 05 ರಂದು ಜಪಾನಿನ ತೋಚಿಗಿ ಪ್ರಾಂತ್ಯದ ನಕಗಾವಾದಲ್ಲಿ ನಡೆದ ಸಮಾರಂಭದಲ್ಲಿ ಗಿನ್ನೆಸ್ ದಾಖಲೆಗೆ ಭಾಜನರಾಗಿದ್ದಾರೆ.
1931 ರಲ್ಲಿ ಕ್ಷೌರಿಕ ವೃತ್ತಿಯನ್ನು ಆರಂಭಿಸಿದ ಇವರು ಇಂದಿಗೂ ಈ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 1939 ರಲ್ಲಿ ತಮ್ಮ ಪತಿಯ ಜೊತೆ ಸೇರಿ ಟೋಕಿಯೋದಲ್ಲಿ ಕ್ಷೌರದಂಗಡಿಯನ್ನು ತೆರೆದರು. ಆದ್ರೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡರು ನಂತರ ಇವರು ನಕಗಾವಾಗೆ ಬಂದು ಅಲ್ಲೊಂದು ಸಲೂನ್ ತೆರೆಯುತ್ತಾರೆ. ಪ್ರಸ್ತುತ ಇವರು ಒಂದು ಸಣ್ಣ ಸಲೂನ್‌ನ ಮಾಲೀಕರಾಗಿದ್ದು, ಅಲ್ಲಿ ಅವರು ದಶಕಗಳಿಂದ ಕ್ಷೌರಿಕ ಕೆಲಸವನ್ನು ಮಾಡುತ್ತಿದ್ದಾರೆ. ಈ ವೃತ್ತಿಯನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿರುವ ಈ ಶತಾಯುಷಿ ಅಜ್ಜಿ ಇಂದಿಗೂ ಅದೇ ಶಕ್ತಿ, ಉತ್ಸಾಹದಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕೆಲಸವನ್ನು ತುಂಬಾ ಪ್ರೀತಿಸುವ ಇವರು ಇದುವೇ ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯದ ರಹಸ್ಯ ಎಂದು ಅವರು ಹೇಳುತ್ತಾರೆ.

Comments