ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ನಿಧನ
ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ನಿಧನ
ಮಾರುತಿ ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ನಿರ್ದೇಶಕ ಮತ್ತು ಗೌರವ ಅಧ್ಯಕ್ಷರಾಗಿದ್ದ ಒಸಾಮು ಸುಜುಕಿರವರು ವಿಧಿವಶರಾಗಿದ್ದಾರೆ.
ಜಪಾನ್ ನ ಸುಜುಕಿ ಮೋಟಾರ್ ಕಾರ್ಪೊರೇಷನ್ ಶುಕ್ರವಾರ ಹಂಚಿಕೊಂಡ ಮಾಹಿತಿಯ ಪ್ರಕಾರ ಲಿಂಫೋಮಾದಿಂದ ಬಳಲುತ್ತಿದ್ದ ಅವರು ಒಸಾಮು ಸುಜುಕಿ 94 ನೇ ವಯಸ್ಸಿನಲ್ಲಿ(ಡಿ.25) ನಿಧನ ಹೊಂದಿದ್ದಾರೆ.
ಭಾರತದಲ್ಲಿ ಆಟೋಮೊಬೈಲ್ ಕಂಪನಿಯನ್ನು ಕಟ್ಟಿ ಬೆಳೆಸಲು ಅನೇಕರು ಹಿಂದೇಟು ಹಾಕುತ್ತಿದ್ದ ವೇಳೆ ಅದನ್ನೇ ಸವಾಲಾಗಿ ಸ್ವೀಕರಿಸಿ ಅಪಾಯವನ್ನು ತೆಗೆದುಕೊಂಡು ಕಾರ್ಯಸಾಧ್ಯವಾಗಿಸಿ ತೋರಿಸಿದ ದಿಗ್ಗಜ ಒಸಾಮು ಸುಜುಕಿ.
1981 ರಲ್ಲಿ ಮಾರುತಿ ಉದ್ಯೋಗ್ ಲಿಮಿಟೆಡ್‌ನೊಂದಿಗೆ ಜಂಟಿ ಉದ್ಯಮವನ್ನು ಆರಂಭಿಸಲು ಆಗಿನ ಭಾರತ ಸರಕಾರದೊಂದಿಗೆ ಪಾಲುದಾರಿಕೆಯ ತೆಗೆದುಕೊಳ್ಳುವಲ್ಲಿ ಒಸಾಮು ಸುಜುಕಿ ರವರು ಮುಖ್ಯ ಪಾತ್ರ ವಹಿಸಿದ್ದರು. ಆ ಕಾಲದಲ್ಲಿ ಆ ನಿರ್ಧಾರ ಉದ್ಯಮ ನಷ್ಟಕ್ಕೆ ಕಾರಣವಾಗಬಹುದು ಎಂದು ಅನೇಕರು ನಂಬಿದ್ದರು. ಅದನ್ನು ಸುಳ್ಳಾಗಿಸಿ ತೋರಿಸಿದವರು ಒಸಾಮು ಸುಜುಕಿ
Comentários