ಪುತ್ತೂರು : ಶ್ರೀ ವಿಷ್ಣು ಎಂಟರ್ ಪ್ರೈಸಸ್ ಸ್ಥಳಾಂತರಗೊಂಡು ಶುಭಾರಂಭ
ಪುತ್ತೂರು : ಶ್ರೀ ವಿಷ್ಣು ಎಂಟರ್ ಪ್ರೈಸಸ್ ಸ್ಥಳಾಂತರಗೊಂಡು ಶುಭಾರಂಭ

ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳು

ಈ ಹಿಂದೆ ಪುತ್ತೂರು ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದ ಶ್ರೀ ವಿಷ್ಣು ಎಂಟರ್ ಪ್ರೈಸಸ್ ಸಂಸ್ಥೆಯು ಪುತ್ತೂರು ಇನ್ ಲ್ಯಾಂಡ್ ಮಯೂರ ಬಳಿ, ಮುಖ್ಯ ರಸ್ತೆ ಬೊಳುವಾರು ಇಲ್ಲಿಗೆ ಸ್ಥಳಾಂತರಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಡಿ.12 ರಂದು ನಡೆಯಿತು. ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಸಂಸ್ಥೆಯ ಮ್ಹಾಲಕರಾದ ಜಯಂತ್ ರವರು ಧರ್ಮದರ್ಶಿಗಳಿಗೆ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮ್ಹಾಲಕರಾದ ಜಯಂತ್ ರವರು “ನಮ್ಮಲ್ಲಿ ವಾಹನಗಳ ಬ್ಯಾಟರಿ, ಇನ್ವರ್ಟರ್ ಗಳ ಬ್ಯಾಟರಿ ಹಾಗೂ ಸೋಲಾರ್ ಸಿಸ್ಟಮ್ ಅಳವಡಿಕೆ ಯನ್ನು ಜಿಲ್ಲೆಯಾದ್ಯಂತ ಗ್ರಾಹಕರ ಕೈಗೆಟುಕುವ ದರದಲ್ಲಿ ಮಾಡಿಕೊಡುತ್ತೇವೆ, ಗ್ರಾಹಕರು ಈ ಹಿಂದಿನಂತೆ ಸಹಕರಿಸಬೇಕು” ಎಂದರು.

ವಿ.ಜೆ ವಿಖ್ಯಾತ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮ್ಹಾಲಕರ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
Comments