ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ...!
ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ...!
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ವಿದೇಶಿ ಬಂಡವಾಳದ ಹೊರಹರಿವು, ಟ್ರಂಪ್ ನೀತಿಯ ಪರಿಣಾಮ ಸೋಮವಾರ (ಜ.13) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 1,048.90 ಅಂಕಗಳಷ್ಟು ಭಾರೀ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದ್ದು, ಹೂಡಿಕೆದಾರರು ಕೋಟ್ಯಂತರ ರೂ. ಕಳೆದುಕೊಂಡಂತಾಗಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ 1,049 ಅಂಕಗಳಷ್ಟು ಕುಸಿತದೊಂದಿಗೆ 76,330.01 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 345.55 ಅಂಕಗಳಷ್ಟು ಇಳಿಕೆಯೊಂದಿಗೆ 25,100 ಅಂಕಗಳಿಗೆ ಕುಸಿದಿದೆ.
ಸಂವೇದಿ ಸೂಚ್ಯಂಕ, ನಿಫ್ಟಿ ಕುಸಿತದಿಂದ ಟ್ರೆಂಟ್, ಅದಾನಿ ಎಂಟರ್ ಪ್ರೈಸಸ್, ಭಾರತ್ ಎಲೆಕ್ಟ್ರಾನಿಕ್ಸ್, ಬಿಪಿಸಿಎಲ್, ಅದಾನಿ ಪೋರ್ಟ್ಸ್,ಕ್ಯಾಪಿಟಲ್ ಗೂಡ್ಸ್, ಪವರ್, ಪಿಎಸ್ ಯು ಷೇರುಗಳ ಮೌಲ್ಯ ಕುಸಿತ ಕಂಡಿದೆ. ಮತ್ತೊಂದೆಡೆ ಟಿಸಿಎಸ್, ಇಂಡಸ್ ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಎಚ್ ಯುಎಲ್ ಷೇರುಗಳು ಲಾಭಗಳಿಸಿದೆ.
ಷೇರುಪೇಟೆ ವಹಿವಾಟಿನಲ್ಲಿ 1000ಕ್ಕೂ ಅಧಿಕ ಅಂಕಗಳ ಕುಸಿತದಿಂದಾಗಿ ಹೂಡಿಕೆದಾರರ 5 ಲಕ್ಷ ಕೋಟಿ ರೂಪಾಯಿ ಹಣ ಕರಗಿಹೋದಂತಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದ್ದು, ಮತ್ತೊಂದೆಡೆ ಕಚ್ಚಾ ತೈಲ ಬೆಲೆ ಶೇ.2ರಷ್ಟು ಏರಿಕೆ ಕಂಡಿರುವುದು ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Comments