ಸುಳ್ಯ : ಶ್ರೀ ಚೆನ್ನಕೇಶವ ಕಲಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ
ಸುಳ್ಯ : ಶ್ರೀ ಚೆನ್ನಕೇಶವ ಕಲಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ
ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಶ್ರೀ ಚೆನ್ನಕೇಶವ ಕಲಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಜ.06 ಸೋಮವಾರದಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಜೆ ದೀಪ ಪ್ರಜ್ವಲನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ನಂತರ ದಿ ಯುನೈಟೆಡ್ ನೃತ್ಯ ತಂಡದಿಂದ ಭಜನೆ ಹಾಗೂ ಕುಣಿತ ಭಜನೆ ನಡೆದು ನಂತರ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಹರಪ್ರಸಾದ್ ತುದಿಯಡ್ಕ, ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಹಾಗೂ ಶ್ರೀ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ| ಕೆ.ವಿ ಚಿದಾನಂದ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ನೀರಬಿದಿರೆ, ಕರ್ನಾಟಕ ಪ್ಲೈವುಡ್ ಇಂಡಸ್ಟ್ರೀಸ್ ಅರಂಬೂರು ಇದರ ಮಾಲಕರು ಹಿರಿಯ ಉದ್ಯಮಿಗಳಾದ ಕೃಷ್ಣ ಕಾಮತ್, ಶ್ರೀ ಕಲ್ಕುಡ ದೈವಸ್ಥಾನ ನಾವೂರು, ಗಾಂಧಿನಗರ ಸುಳ್ಯ ಇದರ ಆಡಳಿತ ಧರ್ಮದರ್ಶಿಗಳಾದ ಪಿ.ಕೆ ಉಮೇಶ್, ತಾಲೂಕು ಭಜನಾ ಮಂಡಳಿ ಅಧ್ಯಕ್ಷರಾದ ಶಿವಪ್ರಸಾದ್ ಆಲೆಟ್ಟಿ ಹಾಗೂ ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ್ ಪೈಕ ಉಪಸ್ಥಿತರಿದ್ದರು.
Comments