ಅರೆಸ್ಟ್ ಆಗಿದ್ದ ಬಿಗ್‌ಬಾಸ್ ಸ್ಪರ್ಧಿಗಳಾದ ವಿನಯ್ & ರಜತ್ ರಾತ್ರಿಯೇ ಬಿಡುಗಡೆ...!
ಅರೆಸ್ಟ್ ಆಗಿದ್ದ ಬಿಗ್‌ಬಾಸ್ ಸ್ಪರ್ಧಿಗಳಾದ ವಿನಯ್ & ರಜತ್ ರಾತ್ರಿಯೇ ಬಿಡುಗಡೆ...!

ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಮಾರ್ಚ್ 24ರ ಬೆಳಿಗ್ಗೆ ಅರೆಸ್ಟ್ ಆಗಿದ್ದ ಅವರು ಅದೇ ದಿನ ರಾತ್ರಿ ಬಿಡುಗಡೆ ಹೊಂದಿದ್ದಾರೆ. ನೋಟಿಸ್ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರು ಜೈಲಿನಿಂದ ರಿಲೀಸ್ ಆದರೂ ಈಗ ಮತ್ತೆ ವಿಚಾರಣೆಗೆ ಹಾಜರಿ ಹಾಕಬೇಕಿದೆ.
ವಿನಯ್ ಗೌಡ ಹಾಗೂ ರಜತ್ ಅವರು ‘ಬಾಯ್ಸ್ vs ಗರ್ಲ್ಸ್’ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರು ಶೋ ಪೂರ್ಣಗೊಂಡ ಬಳಿಕ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಇಬ್ಬರೂ ಮಚ್ಚು ಹಿಡಿದು ಝಳಪಿಸಿದ್ದಾರೆ. ಇದು ಸೆಟ್ ಪ್ರಾಪರ್ಟಿ ಎಂದು ಕ್ಯಾಪ್ಶನ್ನಲ್ಲಿ ಬರೆಯಲಾಗಿದೆಯಾದರೂ ಅಲ್ಲಿ ಬಳಕೆ ಆಗಿರೋದು ನಿಜವಾದ ಮಚ್ಚು ಎನ್ನುವ ಆರೋಪ ಇತ್ತು. ಈ ಕಾರಣದಿಂದಲೇ ವಿನಯ್ ಹಾಗೂ ರಜತ್ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ.
ಸೆಟ್ ಪ್ರಾಪರ್ಟಿ ಎಂದು ರಜತ್ ಹಾಗೂ ವಿನಯ್ ಅವರು ಈ ಮೊದಲೇ ಹೇಳಿದ್ದರು. ಆದರೆ, ಇದನ್ನು ಪೊಲೀಸರು ನಂಬಿಲ್ಲ. ಆ ಬಳಿಕ ಅವರನ್ನು ಬಂಧಿಸಲಾಯಿತು. ಈಗ ಮಚ್ಚನ್ನು ಪೊಲೀಸರಿಗೆ ನೀಡಲಾಗಿದೆ. ಈಗ ಮಚ್ಚು ಪರಿಶೀಲಿಸಿದ ಬಳಿಕ ಅದನ್ನು ಫೈಬರ್ ಮಚ್ಚು ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ. ಇನ್ನು, ಮಚ್ಚು ಪರಿಶೀಲನೆಗೆ ಮಧ್ಯರಾತ್ರಿವರೆಗು ಸಮಯ ಬೇಕಿತ್ತಾ ಎಂಬ ಪ್ರಶ್ನೆಯೂ ಮೂಡಿದೆ.

Comments